News Cafe | Gujarat Titans Are IPL 2022 Champions | HR Ranganath | May 30, 2022

2022-05-30 6

15ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ಸ್ ಆಗಿ ಗುಜರಾತ್ ಟೈಟಾನ್ಸ್ ಹೊರಹೊಮ್ಮಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಭರ್ಜರಿ 7 ವಿಕೆಟ್‍ಗಳ ಜಯದೊಂದಿಗೆ ಐಪಿಎಲ್ ಟ್ರೋಪಿಗೆ ಮುತ್ತಿಟ್ಟಿದೆ. ರಾಜಸ್ಥಾನ ನೀಡಿದ 130 ರನ್‍ಗಳ ಟಾರ್ಗೆಟ್ ಬೆನ್ನತ್ತಿದ ಗುಜರಾತ್‍ಗೆ ಆರಂಭಿಕ ಆಘಾತವಾಯ್ತು. ಆದರೂ, ಶುಭ್‍ಮನ್ ಗಿಲ್, ನಾಯಕ ಹಾರ್ದಿಕ್ ಪಾಂಡ್ಯ ಜೋಡಿಯಾಟ ಗೆಲುವಿನ ಖುಷಿಗೆ ಕಾರಣವಾಯ್ತು. ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯ ಶ್ರೇಷ್ಠರೆನಿಸಿಕೊಂಡರು. ಐಪಿಎಲ್‍ಗೆ ಎಂಟ್ರಿಕೊಟ್ಟ ಮೊದಲ ಟೂರ್ನಿಯಲ್ಲೇ ಗುಜರಾತ್ ಚಾಂಪಿಯನ್ ಆಗಿದೆ. ಇನ್ನು ಈ ಬಾರಿ ಐಪಿಎಲ್‍ನಲ್ಲಿ ಗುಜರಾತ್ ತಂಡವೇ ಗೆಲ್ಲುತ್ತೆಂದು ಮೇ 14ರಂದೇ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ ಭವಿಷ್ಯ ನುಡಿದಿದ್ರು. ಐಟಿ, ಇಡಿ, ಸಿಬಿಐ ಮುಂತಾದವು ಕೆಲಸಕ್ಕೆ ಬರಬಹುದು. 2022 ಐಪಿಎಲ್ ಗುಜರಾತ್ ತಂಡ ಗೆಲ್ಲಬಹುದು. ಮೋಟಬಾಯ್ ಮತ್ತು ಅವರ ಮಗ ಖಚಿತಪಡಿಸಬೇಕು ಎಂದು ಅಮಿತ್ ಶಾ ಹಾಗೂ ಜೈ ಶಾ ಬಗ್ಗೆಯು ಪರೋಕ್ಷವಾಗಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರಸ್ತಾಪಿಸಿದ್ದರು. ಈಗ ಐಪಿಎಲ್‍ನಲ್ಲಿ ಗುಜರಾತ್ ತಂಡವೇ ಗೆದ್ದಿದ್ದು.. ಇದು ಮುಂದೆ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆ ಆಗಬಹುದು.

#HRRanganath #NewsCafe #PublicTV #IPL2022